Friday, July 1, 2011

ಬನಶಂಕರಿ ವಾರ್ಡ್: ಬಿಜೆಪಿಗೆ ಭರ್ಜರಿ ಗೆಲುವು

ಬನಶಂಕರಿ ವಾರ್ಡ್: ಬಿಜೆಪಿಗೆ ಭರ್ಜರಿ ಗೆಲುವು

ಬನಶಂಕರಿ ದೇವಾಲಯ ವಾರ್ಡ್‌ ಉಪ ಚುನಾವಣಾ ಫ‌ಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಎ.ಎಚ್‌.ಬಸವರಾಜ್ ಜಯ ಸಾಧಿಸಿದ್ದಾರೆ. ದಿವಾನ್‌ ಅಲಿ ಹತ್ಯೆಯಿಂದ ತೆರವಾಗಿದ್ದರಿಂದ ನಡೆದ ಈ ಉಪ ಚುನಾವಣೆಯಲ್ಲಿ, ದಿವಾನ್‌ ಸಹೋದರ ಜೆಡಿಎಸ್‌ ನ ಮೊಹಮ್ಮದ್‌ ಅಕ್ಬರ್ ಅಲಿ ಸೋಲುಂಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸಿ ವಿಜಯೋತ್ಸಾಹ ಆಚರಿಸುತ್ತಿದ್ದಾರೆ.

ಪಡೆದ ಮತಗಳು :-
ಬಿಜೆಪಿ ಅಭ್ಯರ್ಥಿ – 7092,
ಜೆಡಿಎಸ್ – 5280
ಕಾಂಗ್ರೆಸ್ – 5189.

ಜೆಎಸ್‌ಎಸ್‌ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡು 9.30 ಕ್ಕೆ ಫ‌ಲಿತಾಂಶ ಪ್ರಕಟಗೊಂಡಿತು. ಬನಶಂಕರಿ ವಾರ್ಡ್‌ನ 34 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ನಡೆದಿತ್ತು. ಒಟ್ಟು 35516 ಮತದಾರರ ಪೈಕಿ 18955 ಮತಗಳು ಚಲಾವಣೆಯಾಗಿದ್ದವು. ಕ್ರಿಮಿನಲ್‌ ಹಿನ್ನೆಲೆ ಇರುವ ಹಾಗೂ ದಿವಾನ್‌ ಅಲಿ ಹತ್ಯೆ ಆರೋಪ ಎದುರಿಸುತ್ತಿರುವ ಅಪ್ಸರ್ ಸಹ ಚುನಾವಣಾ ಕಣಕ್ಕೆ ಇಳಿದಿದ್ದರು.

No comments:

Post a Comment